Asianet Suvarna News Asianet Suvarna News

ಎರಡು ಅಚ್ಚರಿಯ ವಿದಾಯ..ಕಾದಿದ್ಯಾ ಮತ್ತೊಂದು ಸರ್‌ಪ್ರೈಜ್? ಸೋಲಿನೊಂದಿಗೆ ಅಂತ್ಯವಾಯ್ತಾ ಮಹೇಂದ್ರನ ಕ್ರಿಕೆಟ್ ಬದುಕು?

ಧೋನಿ ನಿವೃತ್ತಿಯ ಸುಳಿವು ನೀಡಿತಾ ಕೊಹ್ಲಿ ಆಡಿದ ಅದೊಂದು ಮಾತು..?
"ಮಾಹಿ ಭಾಯ್ ಜೊತೆ ಇದೇ ನನ್ನ ಕೊನೇ ಪಂದ್ಯ" ಅಂದಿದ್ದೇಕೆ ವಿರಾಟ್..?
ಟೆನಿಸ್ ಬಾಲ್  ಕ್ರಿಕೆಟ್ ಆಡುತ್ತಿದ್ದವ ಕ್ರಿಕೆಟ್ ಸಾಮ್ರಾಜ್ಯವನ್ನೇ ಕಟ್ಟಿದ ಕಥೆ..!

ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟು, ಐದು ಐಪಿಎಲ್(IPL) ಟ್ರೋಫಿಗಳನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಕುಟಕ್ಕೇರಿಸಿ, ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಮಾಡಲಾಗದ ಮಹತ್ಸಾಧನೆಯನ್ನು ಮಾಡಿ, ಸದ್ದೇ ಇಲ್ಲದೆ ಬಂದು ದೊಡ್ಡ ಸುದ್ದಿ ಮಾಡಿದವರು ಎಂ.ಎಸ್‌. ಧೋನಿ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯ. ಚೆನ್ನೈ ಸೂಪರ್ ಕಿಂಗ್ಸ್(chennai super king) ತಂಡವನ್ನು 27 ರನ್‌ಗಳಿಂದ ಬಗ್ಗು ಬಡಿದ ಆರ್‌ಸಿಬಿ(RCB) ಆಟಗಾರರು ಪ್ಲೇ ಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ರೆ, ಅತ್ತ ಧೋನಿ(MS Dhoni) ಮುಖದಲ್ಲಿ ಕಾಣಿಸಿದ್ದು, ಮತ್ತೆಂದೂ ಕ್ರಿಕೆಟ್ ಆಡಲಾರೆ ಅನ್ನೋ ದೃಢ ನಿರ್ಧಾರನಾ..? ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಐಪಿಎಲ್ ಫೈನಲ್ ಪ್ರವೇಶಿಸತ್ತೆ ಅಂತ ಧೋನಿ ವಿಶ್ವಾಸ ಹೊಂದಿದ್ರು. ಫೈನಲ್ ಪಂದ್ಯ ನಡೆಯೋದು ಚೆನ್ನೈನಲ್ಲೇ. ಅಲ್ಲೇ ಐಪಿಎಲ್ ಟ್ರೋಫಿ ಗೆದ್ದು ಗುಡ್ ಬೈ ಹೇಳೋದಕ್ಕೆ ಧೋನಿ ಪ್ಲಾನ್ ಮಾಡ್ಕೊಂಡಿದ್ರಾ..? ಗೊತ್ತಿಲ್ಲ. ಆದ್ರೆ ಹಿಂದೊಮ್ಮೆ ಧೋನಿ ಆಡಿದ್ದ ಅದೊಂದು ಮಾತು ಅಂತಹ ಒಂದು ಸುಳಿವು ಕೊಟ್ಟು ಬಿಟ್ಟಿತ್ತು. ಭಾರತದ ಯಾವುದೇ ಕ್ರೀಡಾಂಗಣಗಳಲ್ಲಿ ಧೋನಿ ಆಡುವುದನ್ನು ನೋಡುವುದು ಅಭಿಮಾನಿಗಳಿಗೆ ದೊಡ್ಡ ಸಂಭ್ರಮ.

ಇದನ್ನೂ ವೀಕ್ಷಿಸಿ:  CAA Act: ಪಾಕ್ ಸೇರಿದಂತೆ 3 ರಾಷ್ಟ್ರಗಳ ವಲಸಿಗರಿಗೆ ಭಾರತದ ಪೌರತ್ವ: ಯಾರಿಗೆ ಸಿಗಲಿದೆ ಗೊತ್ತಾ ಈ ಪ್ರಮಾಣ ಪತ್ರ?